ಗಲ್ಲಿ ವೀಕ್ಷಣೆ ಸ್ಟೋರಿಗಳಿಂದ ಸ್ಪೂರ್ತಿ ಪಡೆಯಿರಿ

ಜಾಂಜಿಬಾರ್ ಚಿತ್ರ

ಜಾಂಜಿಬಾರ್

World Travel in 360 (WT360) ಪ್ರಾಜೆಕ್ಟ್ ಜಾಂಜಿಬಾರ್‌ನ ಕುರಿತು ತಿಳಿಸುವ ಗಲ್ಲಿ ವೀಕ್ಷಣೆ ವಿಶ್ವಾಸಾರ್ಹ ಫೋಟೋಗ್ರಾಫರ್‌ಗಳ ಸಂಗ್ರಹಣೆಯನ್ನು ವೀಕ್ಷಿಸಿ, ಅವರು ಜಾಂಜಿಬಾರ್ ಪ್ರದೇಶವನ್ನು ನಕ್ಷೆಯಲ್ಲಿ ಸೇರಿಸಲು ಟಾಂಜೇನಿಯಾ ಸರ್ಕಾರದ ಜೊತೆಗೆ ಸೇರಿ ಕೆಲಸ ಮಾಡಿದ್ದಾರೆ. ಫೆಡೆರಿಕೊ ಡೆಬೆಟ್ಟೊ, ನಿಕೋಲಾಯ್ ಒಮೆಲ್ಚೆಂಕೊ ಮತ್ತು ಕ್ರಿಸ್ ಡು ಪ್ಲೆಸಿಸ್ ಈ ದ್ವೀಪಸಮೂಹವನ್ನು ಮ್ಯಾಪಿಂಗ್ ಮಾಡುವುದಕ್ಕೆ ಅಡಿಪಾಯ ಹಾಕಲು, ಸ್ಥಳೀಯರಿಗೆ ಗಲ್ಲಿ ವೀಕ್ಷಣೆ ಫೋಟೋಗ್ರಾಫ್ ಬಗ್ಗೆ ಮತ್ತು ಸಮುದಾಯವು ತಮ್ಮಷ್ಟಕ್ಕೆ ತಾವೇ ಪ್ರಾಜೆಕ್ಟ್ ಅನ್ನು ಮುಂದುವರಿಸಲು ಸುಸ್ಥಿರ ಮಾದರಿಯನ್ನು ನಿರ್ಮಿಸುವುದರ ಬಗ್ಗೆ ಶಿಕ್ಷಣ ನೀಡಲು ಟಾಂಜೇನಿಯಾಕ್ಕೆ ಪ್ರಯಾಣ ಬೆಳೆಸಿದರು.

ಮ್ಯಾನ್ಮಾರ್ ಚಿತ್ರ

ಮ್ಯಾನ್ಮಾರ್

3XVIVR ಪ್ರೊಡಕ್ಷನ್ಸ್‌ನ ಫೋಟೋಗ್ರಾಫರ್ ಆದ ನೈ ಲಿನ್ ಸೆಕ್ ಮತ್ತು ಅವರ ಸಹೋದ್ಯೋಗಿಗಳ ಅದ್ಭುತ ಕಾರ್ಯವನ್ನು ಪ್ರದರ್ಶಿಸುವ ಈ ವೀಡಿಯೊವನ್ನು ನೋಡುತ್ತಾ ಮ್ಯಾನ್ಮಾರ್ ಅನ್ನು ಎಕ್ಸ್‌ಪ್ಲೋರ್ ಮಾಡಿ. 3XVIVR, ತಮ್ಮ ವಿಶೇಷ ಯೋಜನೆಗೆ ಸಾಕಷ್ಟು ಸಮಯ ಮತ್ತು ಶ್ರಮವನ್ನು ಮೀಸಲಿಟ್ಟಿದೆ, ಗಲ್ಲಿ ವೀಕ್ಷಣೆ ಮೂಲಕ ಮ್ಯಾನ್ಮಾರ್ ಅನ್ನು ಡಿಜಿಟಲೀಕರಣಗೊಳಿಸುವ ಮತ್ತು 360 ಡಿಗ್ರಿನಲ್ಲಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ.

ಜಿಂಬಾಬ್ವೆ ಚಿತ್ರ

ಜಿಂಬಾಬ್ವೆ

ಗಲ್ಲಿ ವೀಕ್ಷಣೆ ಮೂಲಕ ಜಿಂಬಾಬ್ವೆಯನ್ನು ಮ್ಯಾಪಿಂಗ್‌ ಮಾಡುವ ಕುರಿತು ತವಾಂಡಾ ಕನ್ಹೆಮಾ ಹೇಳುವ ಕಥೆಯನ್ನು ವೀಕ್ಷಿಸಿ. ಜಿಂಬಾಬ್ವೆಯ ರಾಜಧಾನಿಯಾದ ಹರಾರೆ ಮತ್ತು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾದ ವಿಕ್ಟೋರಿಯಾ ಜಲಪಾತದ ಗಲ್ಲಿ ವೀಕ್ಷಣೆ ಚಿತ್ರಣವನ್ನು Google Maps ನಲ್ಲಿ ಸೇರಿಸುವ ಗುರಿಯೊಂದಿಗೆ ತಮ್ಮ ದೇಶವಾದ ಜಿಂಬಾಬ್ವೆಗೆ ತವಾಂಡಾ ಮರಳಿದರು. ಜಿಂಬಾಬ್ವೆಯ ಸುತ್ತಮುತ್ತಲಿನ ಇತರ ಪ್ರಮುಖ ಸ್ಥಳಗಳನ್ನು ಸೇರಿಸಲು ಅವರು ಇತ್ತೀಚೆಗೆ ತಮ್ಮ ಪ್ರಾಜೆಕ್ಟ್ ಅನ್ನು ವಿಸ್ತರಿಸಿದ್ದಾರೆ.

ಕೀನ್ಯಾ ಚಿತ್ರ

ಕೀನ್ಯಾ

ಕೀನ್ಯಾವನ್ನು ಮ್ಯಾಪಿಂಗ್ ಮಾಡುವ ಕೆಲವು ಸ್ಥಳೀಯ ಮಾರ್ಗದರ್ಶಿಗಳು ಮತ್ತು ಗಲ್ಲಿ ವೀಕ್ಷಣೆ ವಿಶ್ವಾಸಾರ್ಹ ಫೋಟೋಗ್ರಾಫರ್‌ಗಳನ್ನು ಭೇಟಿ ಮಾಡಿ. ವಿಶ್ವವು ಕೀನ್ಯಾದ ಅದ್ಭುತ ಸೌಂದರ್ಯವನ್ನು ಅನುಭವಿಸುವುದಕ್ಕೆ ಸಹಾಯ ಮಾಡುವುದು ಅವರ ಬಯಕೆಯಾಗಿದೆ. ಈ ಬಯಕೆಯೇ ಅವರನ್ನು ಈ ಗುರಿ ಸಾಧಿಸುವ ಅತ್ಯುತ್ತಮ ಸಾಧನವಾದ ಗಲ್ಲಿ ವೀಕ್ಷಣೆಯ ಬಳಿಗೆ ಅವರನ್ನು ನೇರವಾಗಿ ತಂದು ನಿಲ್ಲಿಸಿತು.

Armenia ಚಿತ್ರ

Armenia

Armenia360 ಎಂಬ ಲಾಭರಹಿತ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಜೋ ಹ್ಯಾಕೋಬಿಯನ್ ಅವರ ಮಾತನ್ನು ಕೇಳಿ. ಜೋ ಅವರು ಲಂಡನ್‌ನಲ್ಲಿ ನಡೆದ 2019 ರ ಗಲ್ಲಿ ವೀಕ್ಷಣೆ ಶೃಂಗಸಭೆಯಲ್ಲಿ ತಮ್ಮ ಪೂರ್ವಜರ ಪ್ರಾಚೀನ ಭೂಮಿಯನ್ನು ನಕ್ಷೆ ಮಾಡಿದ ತಂಡದ ಪ್ರಯಾಣದ ಕುರಿತು ಮಾತನಾಡಿದರು. ಈ ಸ್ಟೋರಿಯು ಗಲ್ಲಿ ವೀಕ್ಷಣೆಯನ್ನು ಬಳಸಿ ನಕ್ಷೆಯಲ್ಲಿ ಯಾರಾದರೂ ತಮಗೆ ಬೇಕಾದ ಸ್ಥಳಗಳನ್ನು ಹೇಗೆ ಸೇರಿಸಬಹುದಾಗಿದೆ ಎಂಬುದರ ಕುರಿತಾಗಿದೆ.

ಬರ್ಮುಡಾ ಚಿತ್ರ

ಬರ್ಮುಡಾ

ಪ್ರವಾಸಿ ತಾಣದ ಮಾರ್ಕೆಟಿಂಗ್ ಸಂಸ್ಥೆಯಾದ ಬರ್ಮುಡಾ ಪ್ರವಾಸೋದ್ಯಮ ಪ್ರಾಧಿಕಾರವು, ಮೈಲ್ಸ್ ಪಾರ್ಟ್‌ನರ್‌ಶಿಪ್ ಎಂಬ ಗಲ್ಲಿ ವೀಕ್ಷಣೆಯ ವಿಶ್ವಾಸಾರ್ಹ ಏಜೆನ್ಸಿಯನ್ನು ಗಲ್ಲಿ ವೀಕ್ಷಣೆ ಚಿತ್ರಣವನ್ನು ಸಂಗ್ರಹಿಸಲು ಹೇಗೆ ನೇಮಕ ಮಾಡಿಕೊಂಡಿತು ಎಂಬುದರ ಕುರಿತು ತಿಳಿದುಕೊಳ್ಳಿ. Google Maps ನಲ್ಲಿನ ತಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಆಪ್ಟಿಮೈಸ್ ಮಾಡಲು ಮತ್ತು ಸ್ಥಳೀಯ ವ್ಯಾಪಾರದ ಅನ್ವೇಷಣೆಯನ್ನು ಹುರಿದುಂಬಿಸಲು ಮೈಲ್ಸ್ ಪಾರ್ಟ್‌ನರ್‌ಶಿಪ್ ಬರ್ಮುಡಾ ಪ್ರವಾಸೋದ್ಯಮ ಪ್ರಾಧಿಕಾರಕ್ಕೆ ಸಹಾಯ ಮಾಡಿದರು ಹಾಗೂ ಪ್ರವಾಸಿಗರು ತಾವು ಹಾಕಿದ ಪ್ರಯಾಣದ ಯೋಜನೆಯ (ಅಥವಾ ಬಯಕೆಯ ಕುರಿತು!) ಅನುಸಾರ ವರ್ಚುವಲ್ ಆಗಿ ಬರ್ಮುಡಾವನ್ನು ಎಕ್ಸ್‌ಪ್ಲೋರ್ ಮಾಡಲು ಸಹ ಸಹಾಯ ಮಾಡಿದರು.

ಟೊಂಗಾ ಚಿತ್ರ

ಟೊಂಗಾ

ಗ್ರಿಡ್ ಪೆಸಿಫಿಕ್ ಸಂಸ್ಥಾಪಕರಾದ ತಾನಿಯಾ ವುಲ್ಫ್‌ಗ್ರಾಮ್ ಮತ್ತು ವಿಕುಕಿ ಕಿಂಗಿ, ಟೋಂಗಾದಲ್ಲಿ ತಮ್ಮ ಮ್ಯಾಪಿಂಗ್ ಪ್ರಯಾಣವನ್ನು ದಾಖಲಿಸಿದ್ದಾರೆ. ಟೋಂಗಾ ಮತ್ತು ಇತರ ಪೆಸಿಫಿಕ್ ದ್ವೀಪಗಳ ಸಂಸ್ಕೃತಿಯನ್ನು ಉತ್ತೇಜಿಸಲು, ಅವರು ಸಂಪೂರ್ಣ ದ್ವೀಪಸಮೂಹವನ್ನು ನಕ್ಷೆ ಮಾಡುವ ಮತ್ತು ಅದನ್ನು ಗಲ್ಲಿ ವೀಕ್ಷಣೆಗೆ ಸೇರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದರು. ಅವರ ಆಕರ್ಷಕ ಸ್ಟೋರಿಯನ್ನು ಇಲ್ಲಿ ನೋಡಿ.