ವಿಶ್ವಾಸಾರ್ಹ Street View ಫೋಟೋಗ್ರಾಫರ್‌ಗಳ ನೀತಿ

Google ಉತ್ಪನ್ನಗಳಲ್ಲಿ ಬಳಸಲು ತಮ್ಮ ಗ್ರಾಹಕರ ಪರವಾಗಿ ಇಮೇಜರಿಯನ್ನು ಸಂಗ್ರಹಿಸುವ ಎಲ್ಲಾ Street View ವಿಶ್ವಾಸಾರ್ಹ ಭಾಗೀದಾರರಿಗೆ ಈ ಕಾರ್ಯನೀತಿಯು ಅನ್ವಯಿಸುತ್ತದೆ.

ನಮ್ಮ ಗಲ್ಲಿ ವೀಕ್ಷಣೆ ವಿಶ್ವಾಸಾರ್ಹ ಫೋಟೋಗ್ರಾಫರ್‌ಗಳ ಕಾರ್ಯನೀತಿಯು ನಾಲ್ಕು ಅಂಶಗಳನ್ನು ಒಳಗೊಂಡಿದೆ:


ಪಾರದರ್ಶಕತೆ ಅಗತ್ಯತೆಗಳು

ಗ್ರಾಹಕರು Google ಉತ್ಪನ್ನಗಳಲ್ಲಿ ಇಮೇಜರಿಯನ್ನು ಅಪ್‌ಲೋಡ್ ಮಾಡುವುದರ ಪ್ರಯೋಜನಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಸರಿಯಾದ ಮಾಹಿತಿಯನ್ನು ಹೊಂದಿರಬೇಕು. ಆದ್ದರಿಂದ, ನಮ್ಮ ಎಲ್ಲಾ ವಿಶ್ವಾಸಾರ್ಹ ಭಾಗೀದಾರರು ಈ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಮಾಹಿತಿಯ ವಿಷಯದಲ್ಲಿ ಪಾರದರ್ಶಕವಾಗಿರುವುದು ಅಗತ್ಯವಾಗಿದೆ. ಕೆಳಗೆ ವಿವರಿಸಿರುವ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ, ಇತರ ಸಂಬಂಧಿತ ಮಾಹಿತಿಯನ್ನು ಒದಗಿಸಲು ಗ್ರಾಹಕರು ವಿನಂತಿಸಿದಾಗ ವಿಶ್ವಾಸಾರ್ಹ ಭಾಗೀದಾರರು ಸಮಂಜಸವಾದ ಪ್ರಯತ್ನಗಳನ್ನು ಮಾಡಬೇಕು.

ಇತರರಿಗೆ ಛಾಯಾಗ್ರಹಣ ಸೇವೆಯನ್ನು ಮಾರಾಟ ಮಾಡುವಾಗ, ನೀವು ಅದೇ ಪಾರದರ್ಶಕತೆಯನ್ನು ಮೈಗೂಡಿಸಿಕೊಂಡಿರಬೇಕು ಮತ್ತು ಮುಖ್ಯವಾಗಿ ಇತರ ಜನರು, ಬ್ರ್ಯಾಂಡ್‌ಗಳು ಹಾಗೂ ಸ್ಥಳೀಯ ಕಾನೂನುಗಳಿಗೆ ಅನುಸಾರವಾಗಿ ನಿಮ್ಮ ಕರ್ತವ್ಯಗಳು ಮತ್ತು ಹಕ್ಕುಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ.


Google ಬ್ರ್ಯಾಂಡ್‌ಗಳ ಸೂಕ್ತ ಬಳಕೆ

ವಿಶ್ವಾಸಾರ್ಹ ಸ್ಥಾನಮಾನವನ್ನು ಗಳಿಸಿದ ಫೋಟೋಗ್ರಾಫರ್‌ಗಳು ಮತ್ತು ಕಂಪನಿಗಳು ಮಾತ್ರ Google Maps ಗಲ್ಲಿ ವೀಕ್ಷಣೆ ಬ್ರ್ಯಾಂಡ್ ಮತ್ತು ವಿಶ್ವಾಸಾರ್ಹ ಬ್ಯಾಡ್ಜ್ ಅನ್ನು ಮಾರ್ಕೆಟಿಂಗ್‌ ಸ್ವತ್ತುಗಳನ್ನಾಗಿ ಬಳಸಬಹುದಾಗಿದೆ. ವಿಶ್ವಾಸಾರ್ಹ ಫೋಟೋಗ್ರಾಫರ್ ಆಗಿರುವುದರಿಂದ, ನಿಮ್ಮ ವಿಶೇಷ ಸ್ಥಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನಾವು ನಿಮಗೆ ಆಹ್ವಾನ ನೀಡುತ್ತೇವೆ. Google Maps, ಗಲ್ಲಿ ವೀಕ್ಷಣೆ ಅಥವಾ ಯಾವುದೇ ಇತರ ಸಂಬಂಧಿತ ಲಾಂಛನಗಳು ಸೇರಿದಂತೆ ವಿಶ್ವಾಸಾರ್ಹ ಬ್ಯಾಡ್ಜ್, ಅಕ್ಷರ ರೂಪದ ಗುರುತುಗಳು ಮತ್ತು ಬ್ರ್ಯಾಂಡಿಂಗ್‌ ಅಂಶಗಳನ್ನು ವಿಶ್ವಾಸಾರ್ಹ ಫೋಟೋಗ್ರಾಫರ್‌ಗಳು ಬಳಸಬಹುದಾಗಿದೆ. ನೀವು ಅವುಗಳೊಂದಿಗೆ ಮಾಡಬಹುದಾದ ಮತ್ತು ಮಾಡಬಾರದ ಕೆಲವು ಅಂಶಗಳನ್ನು ನಾವು ಈ ಕೆಳಗೆ ಪಟ್ಟಿ ಮಾಡಿದ್ದೇವೆ. Google ಬ್ರ್ಯಾಂಡ್ ಸ್ವತ್ತುಗಳ ಪರವಾನಗಿಯುಕ್ತ ಬಳಕೆಯನ್ನು ಯಾರೋ ಉಲ್ಲಂಘಿಸಿದ್ದಾರೆ ಎಂದು ನೀವು ಭಾವಿಸಿದರೆ, ನೀವು ಸಮಸ್ಯೆಗಳನ್ನು ಇಲ್ಲಿ ವರದಿ ಮಾಡಬಹುದಾಗಿದೆ. ಇತರ ಎಲ್ಲಾ Google ಬ್ರ್ಯಾಂಡ್ ಸ್ವತ್ತುಗಳಿಗೆ, ನೀವು ಅಸಮರ್ಪಕ ಬಳಕೆಗಳನ್ನು ಇಲ್ಲಿ ವರದಿ ಮಾಡಬಹುದಾಗಿದೆ.


ವಿಶ್ವಾಸಾರ್ಹ ಚಿತ್ರ ಗುಣಮಟ್ಟದ ಅಗತ್ಯತೆಗಳು


ನಿಷೇಧಿಸಲಾದ ಅಭ್ಯಾಸಗಳು


ನಮ್ಮ ಕಾರ್ಯನೀತಿಗಳ ಕುರಿತು

Google ನ Street View ವಿಶ್ವಾಸಾರ್ಹ ಫೋಟೋಗ್ರಾಫರ್‌ಗಳ ಕಾರ್ಯನೀತಿಯ ಕುರಿತು ನೀವು ಚೆನ್ನಾಗಿ ತಿಳಿದುಕೊಳ್ಳುವುದು ಮತ್ತು ಅಪ್ ಟು ಡೇಟ್ ಆಗಿರುವುದು ಬಹಳ ಮುಖ್ಯ. ನಮ್ಮ ಕಾರ್ಯನೀತಿಗಳನ್ನು ಉಲ್ಲಂಘಿಸುತ್ತೀರಿ ಎಂದು ನಮಗೆ ಅನಿಸಿದರೆ, ನಿಮ್ಮ ಅಭ್ಯಾಸಗಳ ಕುರಿತು ವಿವರವಾದ ಪರಿಶೀಲನೆಯನ್ನು ನಡೆಸಲು ಮತ್ತು ಸರಿಪಡಿಸುವ ಕ್ರಮವನ್ನು ತೆಗೆದುಕೊಳ್ಳುವ ಹಾಗೆ ವಿನಂತಿಸಲು ನಾವು ನಿಮ್ಮನ್ನು ಸಂಪರ್ಕಿಸಬಹುದು. ಪುನರಾವರ್ತಿತ ಅಥವಾ ಗಂಭೀರವಾದ ಉಲ್ಲಂಘನೆಗಳ ಸಂದರ್ಭಗಳಲ್ಲಿ, ನಾವು ನಿಮ್ಮನ್ನು ವಿಶ್ವಾಸಾರ್ಹ ಪ್ರೋಗ್ರಾಂನಿಂದ ಹೊರಗಿಡಬಹುದು ಮತ್ತು ಈ ಕುರಿತು ಗ್ರಾಹಕರಿಗೆ ತಿಳಿಸಲು ನಾವು ಅವರನ್ನು ಸಂಪರ್ಕಿಸಬಹುದು. Google Maps ಉತ್ಪನ್ನಗಳಿಗೆ ನೀವು ಕೊಡುಗೆ ನೀಡುವುದನ್ನು ಸಹ ನಾವು ತಡೆಯಬಹುದು.

ಈ ಕಾರ್ಯನೀತಿಗಳು ಥರ್ಡ್ ಪಾರ್ಟಿಗಳಿಗೆ ಅನ್ವಯಿಸಬಹುದಾದ ಯಾವುದೇ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾರ್ಯನೀತಿಗಳಿಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುತ್ತವೆ ಹಾಗೂ ಇವುಗಳನ್ನು ಒಳಗೊಂಡಿವೆ: