Street View ನ 15 ವರ್ಷಗಳನ್ನು ಸಂಭ್ರಮಿಸಲಾಗುತ್ತಿದೆ

2007 ರಲ್ಲಿ ಪ್ರಾರಂಭವಾದ Street View, ಹೊಸತರಲ್ಲಿ ಪ್ರಪಂಚದ 360-ಡಿಗ್ರಿ ನಕ್ಷೆಯೊಂದನ್ನು ರಚಿಸುವ ಅಸಾಧ್ಯ ಆಲೋಚನೆಯಾಗಿತ್ತು. ಅಂದಿನಿಂದ, ನಾವು ಒಟ್ಟಾಗಿ 220 ಬಿಲಿಯನ್‌ಗಿಂತ ಹೆಚ್ಚಿನ ಚಿತ್ರಗಳನ್ನು ಸೆರೆಹಿಡಿದಿದ್ದೇವೆ ಮತ್ತು 100 ದೇಶಗಳು ಮತ್ತು ಪ್ರದೇಶಗಳಾದ್ಯಂತ 10 ಮಿಲಿಯನ್ ಮೈಲುಗಳನ್ನು ಕ್ರಮಿಸಿದ್ದೇವೆ.
ಮಾರ್ಗಮಧ್ಯೆ ನೀವು ಬಾಹ್ಯಾಕಾಶ, ಸಾಗರ ಮತ್ತು ಅವುಗಳ ಮಧ್ಯದಲ್ಲಿರುವ ವಿಸ್ಮಯಕಾರಿ ಸ್ಥಳಗಳನ್ನು ಎಕ್ಸ್‌ಪ್ಲೋರ್ ಮಾಡಿದ್ದೀರಿ ಮತ್ತು ಪ್ರತಿಬಾರಿಯೂ ನೀವು ಮನೆಗೆ ಮರಳುವ ದಾರಿಯನ್ನು ಕಂಡುಕೊಂಡಿದ್ದೀರಿ.

ವಿಸ್ಮಯಕಾರಿ ಪ್ರಯಾಣವೊಂದರ ಕಡೆಗೊಮ್ಮೆ ಹಿಂತಿರುಗಿ ನೋಡಿ

ಲ್ಯಾರಿ ಪೇಜ್ ಅವರ ಬಳಿ ಒಂದು ರೋಮಾಂಚಕ ಆಲೋಚನೆಯಿತ್ತು: "ನಾವು ಪ್ರಪಂಚದ 360-ಡಿಗ್ರಿ ನಕ್ಷೆಯೊಂದನ್ನು ರಚಿಸಿದರೆ ಹೇಗಿರುತ್ತದೆ?"
ಇದನ್ನು ಕಲ್ಪಿಸಿಕೊಳ್ಳಿ! ಮೊಟ್ಟಮೊದಲ Street View ಚಿತ್ರಗಳನ್ನು ಯು.ಎಸ್‌ನ ಐದು ನಗರಗಳಾದ್ಯಂತ ಬಿಡುಗಡೆ ಮಾಡಲಾಗುತ್ತದೆ.
ಕಾರ್-ಮುಕ್ತ ರಸ್ತೆ ಮಾರ್ಗಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯಲು Street View ಟ್ರೈಕ್‌ಗಳು ಕಾರ್ಯಪ್ರವೃತ್ತವಾಗುತ್ತವೆ.
Street View ಸ್ನೋಮೊಬೈಲ್ ವಿಸ್ಲರ್ ಪರ್ವತದ ಇಳಿಜಾರುಗಳ ಕಡೆಗೆ ಹೊರಟು ನಿಲ್ಲುತ್ತದೆ.
ಅಂಡರ್‌ವಾಟರ್ ಕ್ಯಾಮರಾಗಳು ಗ್ರೇಟ್ ಬ್ಯಾರಿಯರ್ ರೀಫ್‌ಗಳ ವೈಭವವನ್ನು ಸೆರೆಹಿಡಿಯುತ್ತವೆ.
ಟ್ರೆಕ್ಕರ್ ಸಾಲ ಯೋಜನೆಯ ಅಡಿಯಲ್ಲಿ ಥರ್ಡ್-ಪಾರ್ಟಿ ಪಾಲುದಾರರು Street View ನಲ್ಲಿ ತಮ್ಮ ಪ್ರಪಂಚವನ್ನು ಸೆರೆಹಿಡಿಯಬಹುದು.
ಈ ಪ್ರಪಂಚ ಹೇಗಿದೆ ಮತ್ತು ಹೇಗಿತ್ತು ಎಂಬುದನ್ನು ಎಕ್ಸ್‌ಪ್ಲೋರ್ ಮಾಡಲು ನಿಮಗೆ ನೆರವಾಗಲು ಐತಿಹಾಸಿಕ ಚಿತ್ರಣ ಲಭ್ಯವಾಗುತ್ತದೆ.
Street View ಲಿವಾ ಮರುಭೂಮಿಯಲ್ಲಿ ಒಂಟೆಯ ಬೆನ್ನೇರಿ ಅಲೆದಾಡುತ್ತದೆ.
ಈದೀಗ ನೀವು Street View ನ ಅನುಭವವನ್ನು VR ನಲ್ಲಿ ಪಡೆದುಕೊಳ್ಳಬಹುದು.
ನಾವು ಭೂಮಿಯ ಮಟ್ಟದಿಂದ ಕೆಳಕ್ಕೆ ಜಿಗಿದು, ವನೌತುವಿನಲ್ಲಿರುವ ಜೀವಂತ ಜ್ವಾಲಾಮುಖಿಯನ್ನು ತಲುಪುತ್ತೇವೆ.
ಇದೀಗ ನೀವು "ಪ್ರಪಂಚದ ಮೇಲಿನ" 4,000 ವರ್ಷಗಳಷ್ಟು ಹಳೆಯ ಪುರಾತತ್ವ ತಾಣಗಳನ್ನು ಎಕ್ಸ್‌ಪ್ಲೋರ್ ಮಾಡಬಹುದು.
ISS ನಲ್ಲಿ ಪ್ರಯಾಣಿಸುತ್ತಿರುವ ಗಗನಯಾತ್ರಿಗಳು ಮೇಲ್ಭಾಗದಿಂದ ಭೂಮಿಯ ಚಿತ್ರವನ್ನು ಸೆರೆಹಿಡಿಯುತ್ತಾರೆ.
ಟ್ರೆಕ್ಕರ್ ಅಪ್‌ಗ್ರೇಡ್ ಎಂದರೆ ಅಧಿಕ ರೆಸಲ್ಯೂಷನ್ ಚಿತ್ರಗಳು ದೊರೆಯುತ್ತವೆ ಮತ್ತು ಕಡಿಮೆ ಭಾರ ಹೊರಬೇಕಾಗುತ್ತದೆ ಎಂದರ್ಥ.
ಮಂಗಳ ಗ್ರಹ ಸಂಸ್ಥೆಯ ಅಧ್ಯಕ್ಷರು "ಭೂಮಿ ಮೇಲಿನ ಮಂಗಳ ಗ್ರಹದಲ್ಲಿ" ಪ್ರಯಾಣಿಸಲು ನಮ್ಮನ್ನು ಆಹ್ವಾನಿಸುತ್ತಾರೆ.
ಲೈವ್ ವೀಕ್ಷಣೆ ಪ್ರಾರಂಭವಾದರೆ ನಿಮ್ಮ ಪ್ರಪಂಚದ ಮೇಲೆ ಓವರ್‌ಲೇ ಆಗಿರುವ ದಿಕ್ಕುಗಳ ಮೂಲಕ ನ್ಯಾವಿಗೇಟ್ ಮಾಡಲು ನಿಮಗೆ ಸಹಾಯವಾಗುತ್ತದೆ.
102 ದೇಶಗಳು ಮತ್ತು ಪ್ರದೇಶಗಳಿಗೆ ವಿಸ್ತರಣೆಯಾದ Street View ನ ವ್ಯಾಪ್ತಿಯು ಮೂರಂಕಿಯನ್ನು ತಲುಪುತ್ತದೆ.
2004
2007
2008
2010
2012
2013
2014
2014
2015
2017
2017
2017
2018
2019
2019
2022
0

Street View ನಲ್ಲಿ ಹೊಸದೇನಿದೆ?

ಇದೀಗ ಬಿಡುಗಡೆಯಾಗುತ್ತಿದೆ: ಕಾಲದ ಜೊತೆಗೆ ಪ್ರಯಾಣಿಸಿ

ಇದೀಗ ಬಿಡುಗಡೆಯಾಗುತ್ತಿದೆ: ಕಾಲದ ಜೊತೆಗೆ ಪ್ರಯಾಣಿಸಿ

ಇದೀಗ Google Maps ಆ್ಯಪ್‌ನಲ್ಲಿನ Street View ಐತಿಹಾಸಿಕ ಚಿತ್ರಣದ ಮೂಲಕ ಕಾಲ ಕ್ರಮೇಣ ಸ್ಥಳಗಳು ಹೇಗೆ ಬದಲಾಗಿವೆ ಎಂಬುದನ್ನು ನೀವು ನೋಡಬಹುದು.

Google Maps ಆ್ಯಪ್ ಡೌನ್‌ಲೋಡ್ ಮಾಡಿ

ನಮ್ಮ 15 ಮೆಚ್ಚಿನ ವೀಕ್ಷಣೆಗಳು

ನಮ್ಮ 15 ಮೆಚ್ಚಿನ ವೀಕ್ಷಣೆಗಳು

ಮಂಗೋಲಿಯಾದ ಮಂಜುಗೆಡ್ಡೆ ಉತ್ಸವದಿಂದ, ಟಿಟಿಕಾಕಾ ಸರೋವರದ ತೇಲುವ ಮನೆಗಳವರೆಗೆ, ನಮ್ಮ ಗ್ರಹದ ಕೆಲವು ಅತ್ಯಂತ ವಿಸ್ಮಯಕಾರಿ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ.