ಫೋಟೋಗಳ ಮೂಲಗಳು

Google ಮತ್ತು ನಮ್ಮ ಕೊಡುಗೆದಾರರು, ಈ ಎರಡು ಮೂಲಗಳಿಂದ ಗಲ್ಲಿ ವೀಕ್ಷಣೆ ಫೋಟೋಗಳು ಬರುತ್ತವೆ.

ನಮ್ಮ ವಿಷಯ

ನಮ್ಮ ವಿಷಯ

Google-ಮಾಲೀಕತ್ವದ ಚಿತ್ರಣಗಳ ಕ್ರೆಡಿಟ್ “ಗಲ್ಲಿ ವೀಕ್ಷಣೆ” ಅಥವಾ “Google ನಕ್ಷೆಗಳು" ಎಂಬುದಾಗಿರುತ್ತದೆ. ನಮ್ಮ ಚಿತ್ರಣಗಳಲ್ಲಿ ಮುಖಗಳು ಮತ್ತು ಲೈಸೆನ್ಸ್ ಪ್ಲೇಟ್‍ಗಳನ್ನು ನಾವು ಸ್ವಯಂಚಾಲಿತವಾಗಿ ಮಸುಕುಗೊಳಿಸಿರುತ್ತೇವೆ.

ಕೊಡುಗೆದಾರರ ವಿಷಯ

ಇತರ ಕೊಡುಗೆದಾರರ ವಿಷಯ

ಬಳಕೆದಾರರು-ಕೊಡುಗೆ ನೀಡುವ ವಿಷಯವು ಕ್ಲಿಕ್ ಮಾಡಬಹುದಾದ/ಟ್ಯಾಪ್ ಮಾಡಬಹುದಾದ ಖಾತೆಯ ಹೆಸರು ಮತ್ತು ಕೆಲವು ಸಂದರ್ಭಗಳಲ್ಲಿ, ಪ್ರೊಫೈಲ್ ಫೋಟೋ ಸಮೇತವಾಗಿ ಬರುತ್ತದೆ.

Google, ಗಲ್ಲಿ ವೀಕ್ಷಣೆಯನ್ನು ನಿಮಗೆ ಹೇಗೆ ತೋರಿಸುತ್ತದೆ

ಗಲ್ಲಿ ವೀಕ್ಷಣೆಯ ಚಿತ್ರಣಗಳನ್ನು ಹಂಚಿಕೊಳ್ಳಲು, ನಮ್ಮ ಎಂಜಿನಿಯರಿಂಗ್ ತಂಡವು ತೆರೆಮರೆಯಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ಗಲ್ಲಿ ವೀಕ್ಷಣೆಯನ್ನು ನಿಮಗೆ ತಲುಪಿಸಲು ಈ ತಂಡವು ಏನೇನು ಮಾಡುತ್ತಿದೆ ಎಂಬ ಕುರಿತು ಒಂದು ಕಿರುನೋಟ ಇಲ್ಲಿದೆ.

360 ಡಿಗ್ರಿ ಕೋನದಲ್ಲಿ ನಿಮ್ಮ ಸುತ್ತಲಿನ ಜಗತ್ತನ್ನು ಅನ್ವೇಷಿಸಿ. ಗ್ಯಾಲರಿಯನ್ನು ವೀಕ್ಷಿಸಿ

ನಾವು ಎಲ್ಲಿಗೆ ಹೋಗುತ್ತಿದ್ದೇವೆ

ನಿಮ್ಮ ಅನುಭವವನ್ನು ಹೆಚ್ಚಿಸುವ ಚಿತ್ರವನ್ನು ನಿಮ್ಮಲ್ಲಿಗೆ ತರಲು ಮತ್ತು ನಿಮ್ಮ ಸುತ್ತಲಿನ ಜಗತ್ತನ್ನು ಅನ್ವೇಷಿಸುವುದಕ್ಕೆ ನಿಮಗೆ ಸಹಾಯ ಮಾಡಲೆಂದು, ನಾವು ಗಲ್ಲಿ ವೀಕ್ಷಣೆಯ ಕಾರಿನಲ್ಲಿ ಹಲವಾರು ದೇಶಗಳನ್ನು ಸುತ್ತುತ್ತಿದ್ದೇವೆ. ನಾವು ಮುಂದೆ ಪ್ರಯಾಣಿಸಲಿರುವ ಅಥವಾ ಪ್ರವಾಸ ಮಾಡಲಿರುವ ದೇಶಗಳ ಪಟ್ಟಿಯ ಮೇಲೊಮ್ಮೆ ಕಣ್ಣಾಡಿಸಿ.

ದೇಶ
ಪ್ರದೇಶ ಜಿಲ್ಲೆ ಸಮಯ
{[value.region]} {[value.districts]} {[value.datestart| date:'MM/yyyy']} - {[value.dateend| date:'MM/yyyy']}

ನಮ್ಮ ನಿಯಂತ್ರಣದಲ್ಲಿರದ ಅಂಶಗಳ ಕಾರಣಗಳಿಂದಾಗಿ (ಹವಾಮಾನ, ರಸ್ತೆ ಅಡೆತಡೆಗಳು, ಇತ್ಯಾದಿ) ನಮ್ಮ ಕಾರುಗಳು ಕಾರ್ಯನಿರ್ವಹಿಸದೇ ಇರುವ ಅಥವಾ ಸ್ವಲ್ಪ ಬದಲಾವಣೆಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಪಟ್ಟಿಯು ಯಾವುದೇ ಒಂದು ಪಟ್ಟಣವನ್ನು ನಿರ್ದಿಷ್ಟಪಡಿಸುವಾಗ, ಅಲ್ಲಿಂದ ಡ್ರೈವ್ ಮಾಡುವಷ್ಟು ಅಂತರದಲ್ಲಿರುವ ಸಣ್ಣ ಪಟ್ಟಣಗಳು ಮತ್ತು ನಗರಗಳನ್ನೂ ಅದು ಒಳಗೊಂಡಿರಬಹುದು ಎನ್ನುವುದು ನಿಮಗೆ ತಿಳಿದಿರಲಿ.

ನಾವು ಎಲ್ಲಿಗೆ ಭೇಟಿ ನೀಡಿದ್ದೆವು

ನಕ್ಷೆಯಲ್ಲಿರುವ ನೀಲಿ ಪ್ರದೇಶಗಳು ಗಲ್ಲಿ ವೀಕ್ಷಣೆಯು ಎಲ್ಲಿ ಲಭ್ಯವಿದೆ ಎಂಬುದನ್ನು ತೋರಿಸುತ್ತದೆ. ಇನ್ನಷ್ಟು ಸೂಕ್ಷ್ಮವಾಗಿ ನೋಡಲು ಜೂಮ್ ಇನ್‌ ಮಾಡಿ ಅಥವಾ ನಮ್ಮ ವೆಬ್‌ಸೈಟ್‌ಗಳು ಹಾಗೂ ಆ್ಯಪ್‌ಗಳ ಮೂಲಕ ಈ ವಿಷಯವನ್ನು ಬ್ರೌಸ್ ಮಾಡಿ.

Google ನ ಮಾಲೀಕತ್ವದ ಗಲ್ಲಿ ವೀಕ್ಷಣೆ ಫ್ಲೀಟ್

ನಮ್ಮ ಗಲ್ಲಿ ವೀಕ್ಷಣೆ ಫ್ಲೀಟ್ ಮೂಲಕ ಬ್ರೌಸ್ ಮಾಡಿ.