ಹವ್ಯಾಸದಿಂದ ವರ್ಲ್ಡ್ ಸ್ಟೇಜ್‌ವರೆಗೆ - ಫ್ರೆಂಚ್ ಪೊಲಿನೇಶಿಯಾದ ಸೌಂದರ್ಯವನ್ನು ಮ್ಯಾಪಿಂಗ್ ಮಾಡುವುದು ಅದರ ಸ್ಥಳೀಯರಿಗೆ ಯಾವ ರೀತಿಯಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡಿತು.

ಫ್ರೆಂಚ್ ಪೊಲಿನೇಶಿಯಾ - ವೈಟ್ ಸ್ಯಾಂಡ್ ಬೀಚ್‌ಗಳು, ರೋಲಿಂಗ್ ಹೈಕಿಂಗ್ ಟ್ರೈಲ್‌ಗಳು ಮತ್ತು UNESCO ವಿಶ್ವ ಪರಂಪರೆಯ ತಾಣಗಳು ಇದನ್ನು ಜನಪ್ರಿಯ ಆದ್ಯತಾ ಪಟ್ಟಿ ತಾಣವನ್ನಾಗಿ ಮಾಡಿವೆ. ಕೆಲವರು ಅದರ ಕುರಿತು ಕನಸು ಕಾಣುವಲ್ಲಿ ನಿರತರಾಗಿದ್ದರೆ, ಕ್ರಿಸ್ಟೋಫೆ ಕೊರ್ಕಾಡ್ ಅವರು Street View ಅನ್ನು ಬಳಸಿ ಸ್ವರ್ಗವನ್ನು ಮನೆಯ ಹತ್ತಿರ ತರುವ ಮತ್ತು ಟಹೀಟಿಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಒಂದು ಅನನ್ಯ ಅವಕಾಶವನ್ನು ನೋಡಿದರು.

1,800ಕಿಮೀ

ಫೋಟೋಗ್ರಾಫ್ ಮಾಡಿರುವುದು

1,200,000

ಚಿತ್ರಗಳು

ಮೂಲಕ

8K

ಡಿಸ್‌ಪ್ಲೇ ರೆಸಲ್ಯೂಷನ್ ವೀಡಿಯೊಗಳು

8+

ದ್ವೀಪಗಳು

18

ಹೋಟೆಲ್‌ಗಳನ್ನು ಪ್ರಕಟಿಸಲಾಗಿದೆ

+450

ವ್ಯಾಪಾರ ಪಟ್ಟಿಗಳನ್ನು
ರಚಿಸಲಾಗಿದೆ

ವ್ಯಾಪಾರವನ್ನು ಸಂತೋಷದಿಂದ ಸೇರಿಸುವುದು

Street View ಮತ್ತು ಫ್ರೆಂಚ್ ಪೊಲಿನೇಶಿಯಾದ ಅದ್ಭುತ ದ್ವೀಪಗಳ ಮೇಲಿನ ಪ್ರೀತಿಯಿಂದ ಉತ್ತೇಜಿತರಾಗಿ ಕ್ರಿಸ್ಟೋಫೆ ಅವರು 2019 ರಲ್ಲಿ ಟಹೀಟಿ 360 ಅನ್ನು ಸ್ಥಾಪಿಸಿದರು. Street View ನಲ್ಲಿ ಹೈಕಿಂಗ್ ಟ್ರೈಲ್‌ಗಳು ಮತ್ತು ಬೀಚ್‌ಗಳು ಸೇರಿದಂತೆ ಫ್ರೆಂಚ್ ಪೊಲಿನೇಶಿಯಾದಲ್ಲಿನ ದೊಡ್ಡ ಹೊರಾಂಗಣ ಸ್ಥಳಗಳ 360 ಡಿಗ್ರಿ ಚಿತ್ರಣದ ಫೋಟೋಗ್ರಾಫ್ ಮಾಡಲು ಮತ್ತು ಅಪ್‌ಲೋಡ್ ಮಾಡುವಿಕೆಯಲ್ಲಿ ಈ ಕಂಪನಿಯು ಪರಿಣತಿಯನ್ನು ಹೊಂದಿದೆ. ದ್ವೀಪ ಜೀವನದ ಸೌಂದರ್ಯವನ್ನು ಕ್ಯಾಪ್ಚರ್ ಮಾಡುವುದು ಮತ್ತು ಪ್ರದರ್ಶಿಸುವುದು ಅವರ ಮುಖ್ಯ ಉದ್ದೇಶವಾಗಿದ್ದರೂ, ಕ್ರಿಸ್ಟೋಫೆ ಅವರು ತಲ್ಲೀನವಾಗಿಸುವ Street View ನ ಒಳಾಂಗಣ ವರ್ಚುವಲ್ ಟೂರ್‌ಗಳ ಮೂಲಕ ಹೆಚ್ಚಿನ ಗೋಚರತೆಯನ್ನು ಪಡೆಯಲು ಸ್ಥಳೀಯ ವ್ಯಾಪಾರಗಳಿಗೆ ಸಹಾಯ ಮಾಡುತ್ತಾರೆ.

ಮ್ಯಾಪಿಂಗ್ ಫ್ರೆಂಚ್ ಪೊಲಿನೇಶಿಯಾ

ಬಹುತೇಕ ಎಲ್ಲವೂ ಡಿಜಿಟಲೀಕರಣಗೊಂಡ ಸಮಯದಲ್ಲಿ, ದ್ವೀಪಕ್ಕೆ ಕ್ರಿಸ್ಟೋಫೆ ಮತ್ತು ಟಹೀಟಿ 360 ಬರುವ ಮೊದಲು ಫ್ರೆಂಚ್ ಪೊಲಿನೇಶಿಯಾದ ಉಪಗ್ರಹ ವೀಕ್ಷಣೆಗಳು ಮಾತ್ರ ಲಭ್ಯವಿದ್ದವು ಎಂಬುವುದನ್ನು ನಂಬುವುದು ಕಷ್ಟ. ಇನ್ನೂ ಕಷ್ಟದ ವಿಷಯಗಳೆಂದರೆ, ಬೋರಾ ಬೋರಾ ಮತ್ತು ಟಹೀಟಿಯಂತಹ ದ್ವೀಪಗಳಲ್ಲಿನ ಬೀದಿಗಳಿಗೆ ಯಾವುದೇ ಹೆಸರುಗಳಿಲ್ಲ, ಆದ್ದರಿಂದ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಸುತ್ತಾಡುವುದು ಒಂದು ಸವಾಲಾಗಿತ್ತು. ಬಹು ಮುಖ್ಯವಾಗಿ, ಇದು ಅಗ್ನಿಶಾಮಕ ದಳ, ಮೊದಲ ಪ್ರತಿಕ್ರಿಯೆ ನೀಡುವವರು ಮತ್ತು ಕಾನೂನು ಜಾರಿಗೊಳಿಸುವಂತಹ ತುರ್ತು ಸೇವೆಗಳನ್ನು ಒದಗಿಸುವವರಿಗೆ ಅಗತ್ಯಕ್ಕಿಂತ ಹೆಚ್ಚು ಕಷ್ಟಕರವಾಗಿಸಿದೆ.

 

ಸ್ಥಳೀಯ ಸಮುದಾಯಗಳಿಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುವ ಶಕ್ತಿ Street View ಗೆ ಇದೆ ಎಂದು ನಾನು ಯಾವಾಗಲೂ ನಂಬುತ್ತೇನೆ. ನೀವು ಮನೆಯನ್ನು ತೊರೆಯುವ ಮುಂಚೆಯೇ ಒಂದು ನಿರ್ದಿಷ್ಟ ಪ್ರದೇಶಕ್ಕೆ ನಿಮ್ಮನ್ನು ಒಡ್ಡಿಕೊಳ್ಳುವ ಹಾಗೂ ಆ ಪ್ರದೇಶದ ಸುತ್ತಮುತ್ತಲಿನ ಪರಿಚಯವನ್ನು ಪಡೆದುಕೊಳ್ಳುವ ಸಾಮರ್ಥ್ಯವು ಯಾವಾಗಲೂ ನನ್ನನ್ನು ಅಚ್ಚರಿಗೊಳಿಸುತ್ತದೆ. ಫ್ರೆಂಚ್ ಪೊಲಿನೇಶಿಯಾದಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ ಎಂದು ತೋರುತ್ತದೆ, ಅಲ್ಲಿ ಸುಲಭವಾಗಿ ನಿಮ್ಮ ದಾರಿಯನ್ನು ನ್ಯಾವಿಗೇಟ್ ಮಾಡುವುದು ಅಸಾಧ್ಯವಾಗಿದೆ.

-

ಕ್ರಿಸ್ಟೋಫೆ ಕೊರ್ಕಾಡ್, ಟಹೀಟಿ 360 ಸ್ಥಾಪಕರು.

 

Google Street View ಬೊರಾ ಬೊರಾ ಮ್ಯಾಪಿಂಗ್

ದ್ವೀಪದ ಜೀವನಕ್ಕೆ Street View ತರಬಹುದಾದ ಪ್ರಯೋಜನಗಳನ್ನು ಗುರುತಿಸಲಾಗುತ್ತಿದೆ, ಟಹೀಟಿ, ಮೂರಿಯಾ, ಬೋರಾ ಬೋರಾ, ರೈಯಾಟಿಯಾ, ಮೌಪಿಟಿ, ಹುವಾಹೈನ್, ಫಕಾರವಾ ಮತ್ತು ರಂಗಿರೋವಾದಲ್ಲಿನ ಎಲ್ಲಾ ರಸ್ತೆಗಳನ್ನು ನಕ್ಷೆ ಮಾಡಲು ಮತ್ತು ಉಲ್ಲೇಖಿಸಲು ಸ್ಥಳೀಯ ಅಧಿಕಾರಿಗಳು ಟಹೀಟಿ 360 ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ಕ್ರಿಸ್ಟೋಫೆ ಅವರು ಫ್ರೆಂಚ್ ಪೊಲಿನೇಶಿಯಾದ 1,800 ಕಿಮೀ ಪ್ರದೇಶವನ್ನು ಕವರ್ ಮಾಡಲು ಎಲ್ಲಾ ರೀತಿಯ ವಾಹನಗಳು, ಗಾಲ್ಫ್ ಕಾರ್ಟ್‌ಗಳು, ಎಲೆಕ್ಟ್ರಿಕ್ ಬೈಕ್‌ಗಳು, ಜೆಟ್ ಸ್ಕಿನ್‌ಗಳು ಮತ್ತು ಕುದುರೆಗಳನ್ನು ಬಳಸಿದರು. ಕ್ರಿಸ್ಟೋಫೆ ಅವರ ಕವರೇಜ್ ಮತ್ತು ಅಧಿಕಾರಿಗಳು ಹಂಚಿಕೊಂಡ ಸ್ಥಳೀಯ ಭೂ ಪ್ರದೇಶದ ಮಾಹಿತಿಗಾಗಿ ಧನ್ಯವಾದಗಳು, Google Maps ನಲ್ಲಿ ಲೈವ್ ಟ್ರಾಫಿಕ್ ಅಪ್‌ಡೇಟ್‌ಗಳು, ಅತೀ ವೇಗದ ಮಾರ್ಗ ಸಲಹೆಗಳು ಮತ್ತು ಟಹೀಟಿಯಲ್ಲಿನ ಸ್ಥಳೀಯ ವ್ಯಾಪಾರಗಳಿಗೆ ನಿರ್ದೇಶನಗಳನ್ನು ಪಡೆಯಲು ಈಗ ಸಾಧ್ಯವಿದೆ. ಇದರಿಂದಾಗಿ ದ್ವೀಪದಾದ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಮರ್ಥವಾಗಿರುವ ತುರ್ತು ಸೇವೆಗಳಿಗೆ ಇದು ವಿಶೇಷವಾಗಿ ಸಹಾಯಕವಾಗಿದೆ. ಕೊನೆಯದಾಗಿ, Street View ನಲ್ಲಿರುವ ಟಹೀಟಿ 360 ಯ ಚಿತ್ರಗಳ ಪ್ರವೇಶವು ನಗರ ಯೋಜನೆ, ಕಟ್ಟಡಗಳ ನಿರ್ವಹಣೆ ಮತ್ತು ರಸ್ತೆಯ ಪರಿಸ್ಥಿತಿಗಳನ್ನು ಸರಳೀಕರಿಸಿದೆ.

UNESCO ದ ವಿಶ್ವ ಪರಂಪರೆಯ ತಾಣಕ್ಕೆ ಪ್ರವೇಶ

ರೈಯಾಟಿಯಾ ದ್ವೀಪದಲ್ಲಿರುವ ತಪುಟಪುಟಿಯಾ ಪ್ರವಾಸವು ಟಹೀಟಿ 360 ರ ಅತ್ಯಂತ ತಲ್ಲೀನಗೊಳಿಸುವ ಪ್ರವಾಸವಾಗಿದೆ. ಪ್ರತಿ ವರ್ಷ ಫ್ರೆಂಚ್ ಪೊಲಿನೇಶಿಯಾಕ್ಕೆ 300,000 ಪ್ರವಾಸಿಗರನ್ನು ಕರೆತರುವಲ್ಲಿ, ಈ UNESCO ವಿಶ್ವ ಪರಂಪರೆಯ ತಾಣವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದರೆ, 360 ರಲ್ಲಿ ಅದರ ಸೌಂದರ್ಯವನ್ನು ಕ್ಯಾಪ್ಚರ್ ಮಾಡುವ ಮೂಲಕ, ಕ್ರಿಸ್ಟೋಫೆ ಅವರು ಲಕ್ಷಾಂತರ ಜನರಿಗೆ ಅದನ್ನು ವರ್ಚುವಲ್ ಆಗಿ ಅನುಭವಿಸಲು ತೆರೆದಿಟ್ಟಿದ್ದಾರೆ. Street View ನಲ್ಲಿ ಕ್ರಿಸ್ಟೋಫೆ ಅವರು ಪ್ರಕಟಿಸಿದ ಕೃತಿಯು ವಿಶ್ವದ ಅದ್ಭುತವನ್ನು ನಮ್ಮ ಸ್ಕ್ರೀನ್‌ಗಳ ಮೇಲೆ ತಂದಿತು, ಅದನ್ನು ಎಕ್ಸ್‌ಪ್ಲೋರ್ ಮಾಡಲು ನಮಗೆಲ್ಲರಿಗೂ ಅವಕಾಶ ಮಾಡಿಕೊಟ್ಟಿತು.

ಸಂಪೂರ್ಣ ದ್ವೀಪವನ್ನು ಕವರ್ ಮಾಡುವುದು ಸುಲಭದ ಮಾತಲ್ಲ, ಆದರೆ ಕ್ರಿಸ್ಟೋಫೆ ಅವರು ಈ ಸವಾಲನ್ನು ಎದುರಿಸಲು ಮುಂದಾಗಿದ್ದರು. ಬೋರಾ ಬೋರಾ ದಲ್ಲಿರುವ ಎಲ್ಲವನ್ನೂ ತಾವು ಕ್ಯಾಪ್ಚರ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು, ಅವರು ದ್ವೀಪವನ್ನು ಕಾರು, ದೋಣಿ ಮತ್ತು ಕಾಲ್ನಡಿಗೆಯ ಮೂಲಕ ಕವರ್ ಮಾಡಿದ್ದಾರೆ. ಕ್ರಿಸ್ಟೋಫೆ ಅವರು ಇಡೀ ದ್ವೀಪವನ್ನು ನಕ್ಷೆ ಮಾಡಲು ಕೇವಲ ಏಳು ದಿನಗಳನ್ನು ತೆಗೆದುಕೊಂಡರು ಮತ್ತು ಅದನ್ನು Street View ನಲ್ಲಿ ಅನುಭವಿಸಲು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದರು.

ಬೋರಾ ಬೋರಾ ಜೊತೆಗೆ, ಕ್ರಿಸ್ಟೋಫೆ ಅವರು ಪಪೀಟೆಯ ಎಲ್ಲಾ ಬೀದಿಗಳು, ಟಹೀಟಿಯ ರಾಜಧಾನಿ, ಹಾಗೆಯೇ ಪಿರೇ ಪಟ್ಟಣವನ್ನೂ ಸಹ ಫೋಟೋಗ್ರಾಫ್ ಮಾಡಿದ್ದಾರೆ. Street View ನಲ್ಲಿ ಎರಡೂ ಪಟ್ಟಣಗಳ ಚಿತ್ರಗಳು ಕಾಣಿಸಿಕೊಂಡಾಗ ಇವರ ಶ್ರಮ ಸಾರ್ಥಕವಾಯಿತು.

ಸ್ಥಳೀಯ ವ್ಯಾಪಾರಗಳು ಸಹ Street View ನಲ್ಲಿ ಮಿಂಚುವ ಅವಕಾಶವನ್ನು ಪಡೆದುಕೊಂಡವು. ದೊಡ್ಡ ಹೋಟೆಲ್ ಗುಂಪುಗಳಾದ ಇಂಟರ್‌ಕಾಂಟಿನೆಂಟಲ್, ಮನಾವಾ ಮತ್ತು ಹಿಲ್ಟನ್, ಹಾಗೆಯೇ ಸಣ್ಣ B&B ವ್ಯಾಪಾರಗಳು ಜಾಗತಿಕ ಮಟ್ಟದಲ್ಲಿ ತಮ್ಮ ಸೌಲಭ್ಯಗಳನ್ನು ಪ್ರದರ್ಶಿಸುವ ಅವಕಾಶ ದೊರೆತಿರುವುದಕ್ಕಾಗಿ ಉತ್ಸುಕಗೊಂಡಿವೆ.

ಬಕೆಟ್ ಪಟ್ಟಿಗೆ ಹೆಚ್ಚಿನದನ್ನು ಸೇರಿಸುವುದು

ಈ ವರ್ಷದ ಅಂತ್ಯದವರೆಗೆ ಫ್ರೆಂಚ್ ಪೊಲಿನೇಶಿಯಾದ ಎಲ್ಲಾ ದ್ವೀಪಗಳನ್ನು ಸೇರಿಸಿಕೊಳ್ಳಲು ಟಹೀಟಿ 360 ಆಶಿಸುತ್ತಿದೆ, ಹಾಗೆಯೇ ಮಾಪಿಟಿ, ತಾಹಾ, ಮಾರ್ಕ್ವೆಸಸ್ ದ್ವೀಪಗಳು, ಗ್ಯಾಂಬಿಯರ್ಸ್ ದ್ವೀಪಗಳು ಮತ್ತು ಆಸ್ಟ್ರೇಲ್ ದ್ವೀಪಗಳು ಮುಂದೆ ಸೇರ್ಪಡೆಗೊಳ್ಳಲಿವೆ. ಫ್ರೆಂಚ್ ಪೊಲಿನೇಶಿಯಾದಲ್ಲಿ ಇನ್ನೂ ಸಾಕಷ್ಟು ಪ್ರದೇಶವನ್ನು ಕವರ್ ಮಾಡಬೇಕಾಗಿದೆ, ಕ್ರಿಸ್ಟೋಫೆ ಅವರು ಈಗಾಗಲೇ ತಮ್ಮ ಮುಂದಿನ ಸಾಹಸದ ಬಗ್ಗೆ ಯೋಚಿಸುತ್ತಿದ್ದಾರೆ. 400 ಕಿಮೀ ಸೈಕ್ಲಿಂಗ್ ಮಾರ್ಗಗಳು, ಅಮಿಯೆನ್ಸ್‌ನ ಹಾರ್ಟಿಲ್ಲೊನೇಜ್‌ಗಳು ಮತ್ತು ಸೊಮೆ ಟೂರಿಸಮ್‌ಗೆ ಸಂಬಂಧಿಸಿದ ಪ್ರವಾಸೋದ್ಯಮ ರೈಲುಗಳನ್ನು ಕವರ್ ಮಾಡುವ ಕುರಿತು ಫ್ರೆಂಚ್ ಸ್ಥಳೀಯ ಅಧಿಕಾರಿಗಳ ಜೊತೆಗೆ ತಮ್ಮ ಊರಿನಲ್ಲಿ ಕೆಲಸ ಮಾಡಲು ಅವರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಕ್ರಿಸ್ಟೋಫೆ ಅವರು 2024 ರ ಒಲಿಂಪಿಕ್ ಕ್ರೀಡಾಕೂಟದ ಸರ್ಫಿಂಗ್ ಈವೆಂಟ್‌ಗಳ ಆತಿಥ್ಯ ವಹಿಸಿಕೊಂಡಿರುವ ಟೀಹುಪೂ ಅನ್ನು ಸಹ ಕವರ್ ಮಾಡಲಿದ್ದಾರೆ. ಮತ್ತು ಅದರ ನಡುವೆ, ಸ್ಥಳೀಯರಿಗೆ ದೈನಂದಿನ ಜೀವನವನ್ನು ಸುಧಾರಿಸಲು ಮತ್ತು ಹೆಚ್ಚು ಜನರು ಸ್ವರ್ಗವನ್ನು ಎಕ್ಸ್‌ಪ್ಲೋರ್ ಮಾಡುವುದಕ್ಕೆ ಸಹಾಯ ಮಾಡಲು, ನ್ಯೂ ಕ್ಯಾಲೆಡೋನಿಯಾ, ವಾಲಿಸ್ ಮತ್ತು ಫುಟುನಾ ದ್ವೀಪಗಳನ್ನು Street View ನಲ್ಲಿ ಸೇರಿಸಲು ಅವರು ಆಶಿಸಿದ್ದಾರೆ.

Street View ಎನ್ನುವುದು ಸಹಯೋಗದ ಪ್ಲ್ಯಾಟ್‌ಫಾರ್ಮ್ ಆಗಿದ್ದು, ಸಮುದಾಯಗಳು ಅಭಿವೃದ್ಧಿ ಹೊಂದಲು, ವ್ಯಾಪಾರಗಳು ಬೆಳೆಯಲು ಮತ್ತು Google Maps ನಲ್ಲಿ ತಲ್ಲೀನಗೊಳಿಸುವ ಚಿತ್ರಣವನ್ನು ಪ್ರಕಟಿಸುವ ಮೂಲಕ ವಿಶ್ವದ ಅದ್ಭುತಗಳನ್ನು ಮನೆಯಲ್ಲಿ ನೋಡಲು ಕೊಡುಗೆದಾರರು ಸಹಾಯ ಮಾಡುತ್ತಾರೆ. ಎಲ್ಲಕ್ಕಿಂತ ಉತ್ತಮವಾಗಿ, ಯಾರಾದರೂ ತಮ್ಮದೇ ಆದ ಯಶಸ್ಸನ್ನು Street View ಮೂಲಕ ನಕ್ಷೆ ಮಾಡಬಹುದು, ಇದಕ್ಕೆ ಬೇಕಾಗಿರುವುದು ಕೊಡುಗೆ ನೀಡಲು ಮೊದಲ ಹೆಜ್ಜೆ ಇಡುವುದು.

ಇನ್ನಷ್ಟು ಎಕ್ಸ್‌ಫ್ಲೋರ್ ಮಾಡಿ

ನಿಮ್ಮ ಸ್ವಂತ Street View ಇಮೇಜರಿ ಅನ್ನು ಹಂಚಿಕೊಳ್ಳಿ