ಅಹಂ ಬಿಟ್ಟರೆ ಭಾರತೀಯರು ಉದ್ಧಾರ: ನಾರಾಯಣ ಮೂರ್ತಿ


ಮುಂಬೈ, ಆಗಸ್ಟ್, 17: "ನಾವು ಭಾರತೀಯರು ನಮ್ಮಲ್ಲಿರುವ ಇಗೋ ಅಥವಾ ಅಹಂ ಭಾವನೆ ಬಿಟ್ಟರೆ ತನ್ನಿಂದ ತಾನೇ ಅಭಿವೃದ್ಧಿ ಹೊಂದುತ್ತೇವೆ" ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಮುಂಬೈನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರ ವೇಳೆ ಭಾಷಣ ಮಾಡಿದ ಮೂರ್ತಿ, ಉತ್ತಮ ವಿಚಾರಗಳು ಎಲ್ಲಿಂದ ಬಂದರೂ ಸ್ವೀಕರಿಸಬೇಕು. ಸಾಧನೆ ಮಾಡಿದವರ ಬಗ್ಗೆ ಪೂರ್ವಾಗ್ರಹ ಬಿಟ್ಟು ತಿಳಿದುಕೊಳ್ಳಬೇಕು. ಅವರ ಹೆಜ್ಜೆಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.[ಭಯದಲ್ಲಿ ಬದುಕುತಿಹ ಅಲ್ಪಸಂಖ್ಯಾತರು : ಎನ್ಆರ್‌ಎನ್ ಉವಾಚ]

Advertisement

Rain Alert: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಈ ಜಿಲ್ಲೆಗಳಲ್ಲಿ ಭಾರಿ ಬಿಸಿಲು

ನಮಗೆಲ್ಲ ಗೊತ್ತಿದೆ ಎಂಬ ಅಹಂಕಾರ ಭಾವನೆ ಬಹುತೇಕ ಭಾರತೀಯರಲ್ಲಿ ಮನೆ ಮಾಡಿದೆ. ಅದನ್ನು ಬಿಟ್ಟು ಹೊರಕ್ಕೆ ಬಂದರೆ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯ. ಇಲ್ಲವಾದರೇ ಹೀಗೆ ಇರುತ್ತೇವೆ ಎಂದು ಮೂರ್ತಿ ಹೇಳಿದ್ದಾರೆ.[ಇನ್ಫಿ ನಾರಾಯಣಮೂರ್ತಿ ಸಿಎಂ ಭೇಟಿಯಾಗಿದ್ದು ಯಾಕೆ?]

ಜನರು ಸಹ ಮಹಾನಗರಕ್ಕೆ ತೆರಳಿ ಕೆಲಸ ಮಾಡಲು ಬಯಸುತ್ತಿದ್ದಾರೆ. ದ್ವಿತೀಯ ದರ್ಜೆಯ ನಗರಗಳಿಗೂ ಯುವಜನರು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಗರೀಕರಣ ಬೇಕು ಬೇಡ ಎಂಬ ಗೊಂದಲದ ನಡುವೆ ದೇಶದ ಅಭಿವೃದ್ಧಿ ಹಿಂದಕ್ಕೆ ಓಡುತ್ತಿದೆ ಎಂದು ನಾರಾಯಣಮೂರ್ತಿ ಹೇಳಿದ್ದಾರೆ.

English Summary

Infosys co-founder Narayana Murthy delivered the fourth annual Independence lecture in Mumbai last week. "The biggest challenge for all of us, not just politicians or bureaucrats, is that we, Indians, have the highest ego per unit of achievement, Narayana Murthy said.
Advertisement