Please enable javascript.Moringa Leaf Powder,ನುಗ್ಗೆ ಕಾಯಿ ಮತ್ತು ಅದರ ಸೊಪ್ಪನ್ನು ಆಹಾರದಲ್ಲಿ ಸೇರಿಸಿದರೆ ಪಡೆಯಬಹುದಾದ ಪ್ರಯೋಜನಗಳು - health benefits of consuming drumsticks or moringa - Vijay Karnataka

ನುಗ್ಗೆ ಕಾಯಿ ಮತ್ತು ಅದರ ಸೊಪ್ಪನ್ನು ಆಹಾರದಲ್ಲಿ ಸೇರಿಸಿದರೆ ಪಡೆಯಬಹುದಾದ ಪ್ರಯೋಜನಗಳು

Vijaya Karnataka Web | 2 Nov 2020, 6:24 pm
Subscribe

ನುಗ್ಗೆ ಸೊಪ್ಪು, ನುಗ್ಗೆ ಕಾಯಿ, ನುಗ್ಗೆ ಹೂವುಗಳನ್ನು ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುವುದಲ್ಲದೆ ವಿವಿಧ ಔಷಧಿ ಹಾಗೂ ಸೌಂದರ್ಯ ಚಿಕಿತ್ಸಕವನ್ನಾಗಿಯೂ ಉಪಯೋಗಿಸುತ್ತಾರೆ. ನುಗ್ಗೆ ಸೊಪ್ಪುಗಳನ್ನು ಬಳಸಿಕೊಳ್ಳುವುದರಿಂದ ಯಾವೆಲ್ಲಾ ಸೌಂದರ್ಯ ವೃದ್ಧಿಯನ್ನು ಮಾಡಬಹುದು ಎನ್ನುವುದನ್ನು ತಿಳಿಯೋಣ.

health benefits of consuming drumsticks or moringa
ನುಗ್ಗೆ ಕಾಯಿ ಮತ್ತು ಅದರ ಸೊಪ್ಪನ್ನು ಆಹಾರದಲ್ಲಿ ಸೇರಿಸಿದರೆ ಪಡೆಯಬಹುದಾದ ಪ್ರಯೋಜನಗಳು
ನುಗ್ಗೆ ಕಾಯಿ ಹಾಗೂ ಅದರ ಸೊಪ್ಪನ್ನು ಸಾಮಾನ್ಯವಾಗಿ ಭಾರತೀಯ ಆಹಾರ ಪದಾರ್ಥಗಳಲ್ಲಿ ಸೇರಿಸುತ್ತಾರೆ. ಇದರಿಂದ ವಿವಿಧ ಬಗೆಯ ಖಾರದ ತಿನಿಸು, ಸಿಹಿ ತಿನಿಸು ಹಾಗೂ ಆಹಾರ ಪದಾರ್ಥಗಳಲ್ಲಿ ಬಳಸಲಾಗುವುದು. ಇವುಗಳಿಂದ ತಯಾರಿಸಲಾಗುವ ಮೇಲೋಗರಗಳು ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಜೀವ ಸತ್ವಗಳನ್ನು ನೀಡುವುದರ ಮೂಲಕ ಪೋಷಣೆ ನೀಡುತ್ತದೆ. ನುಗ್ಗೆ ಮರದ ಪ್ರತಿಯೊಂದು ಭಾಗವು ಮನುಕುಲಕ್ಕೆ ವಿಶೇಷ ಉಪಯೋಗಗಳಿಗೆ ನೆರವಾಗುತ್ತವೆ.

​ವಯಸ್ಸಾಗುವ ಚಿಹ್ನೆಯನ್ನು ನಿಧಾನಗೊಳಿಸುವುದು

​ವಯಸ್ಸಾಗುವ ಚಿಹ್ನೆಯನ್ನು ನಿಧಾನಗೊಳಿಸುವುದು

ನುಗ್ಗೆ ಸೊಪ್ಪಿನ ಎಣ್ಣೆ ಮತ್ತು ನುಗ್ಗೆ ಸೊಪ್ಪಿನ ಪುಡಿಯ ಬಳಕೆ ಮಾಡಿ ಮುಖಕ್ಕೆ ಲೇಪನ ಹಚ್ಚಬಹುದು. ಇದು ಮುಖದ ತ್ವಚೆಯನ್ನು ಆರೋಗ್ಯಕರವಾಗಿ ಇರಿಸುವುದರ ಜೊತೆಗೆ ಸುಕ್ಕುಗಳಾಗುವುದನ್ನು ತಡೆಯುವುದು. ವಯಸ್ಸಾದ ಚಿಹ್ನೆಯನ್ನು ತೋರಿಸುವ ಗೆರೆಗಳನ್ನು ನಿಧಾನಗೊಳಿಸುವುದು. ಚರ್ಮದ ಸ್ಥಿರತೆ ಬಿಗಿಯಾಗಿರುವಂತೆ ಮಾಡುವುದು. ಅಲ್ಲದೆ ಮುಖದ ಮೇಲೆ ಇರುವ ಕಲೆಯನ್ನು ನಿವಾರಿಸಲು ಸಹಾಯ ಮಾಡುವುದು.

​ತುಟಿಗಳನ್ನು ತೇವಗೊಳಿಸುವುದು

​ತುಟಿಗಳನ್ನು ತೇವಗೊಳಿಸುವುದು

ನುಗ್ಗೆ ಸೊಪ್ಪಿನ ಎಣ್ಣೆಯನ್ನು ತುಟಿಗೆ ಹಚ್ಚುವುದು ಅಥವಾ ತುಟಿಗೆ ಹಚ್ಚುವ ಬಾಮ್‍ಗಳಿಗೆ ಸೇರಿಸಿಕೊಂಡು ಅನ್ವಯಿಸಿಕೊಂಡರೆ ತುಟಿಗಳು ಆರೋಗ್ಯಕರವಾಗಿ ಹಾಗೂ ತೇವಾಂಶದಿಂದ ಕೂಡಿರುತ್ತದೆ. ತುಟಿಗಳ ಸೂಕ್ಷ್ಮ ಚರ್ಮಗಳನ್ನು ಆಧ್ರ್ರಕಗೊಳಿಸಿ ಅವುಗಳನ್ನು ಮೃದುವಾಗಿ ಇರಿಸುವುದು. ಮಾಲಿನ್ಯ ಹಾಗೂ ವಾತಾವರಣದ ಕಾರಣಗಳಿಂದ ತುಟಿ ಒಡೆಯುವುದು, ಉರಿಯೂತ ಹಾಗೂ ಸೀಳಿಕೆಯಂತಹ ಸಮಸ್ಯೆಯಿಂದ ಮುಕ್ತರಾಗಬಹುದು.

​ಮೈಬಣ್ಣವನ್ನು ಸುಧಾರಿಸುವುದು

​ಮೈಬಣ್ಣವನ್ನು ಸುಧಾರಿಸುವುದು

ನುಗ್ಗೆ ಸೊಪ್ಪಿನಲ್ಲಿ ಇರುವ ಔಷಧೀಯ ಗುಣ ಹಾಗೂ ಪೋಷಕಾಂಶಗಳು ಚರ್ಮದ ಆರೈಕೆಗೆ ಅತ್ಯುತ್ತಮವಾದುದ್ದು. ನುಗ್ಗೆ ಸೊಪ್ಪಿನ ಪೇಸ್ಟ್ ಅನ್ನು ಮೈಗಳಿಗೆ ಹಾಗೂ ಮುಖಕ್ಕೆ ಗಣನೀಯವಾಗಿ ಅನ್ವಯಿಸುವುದರಿಂದ ಮೈ ಬಣ್ಣದಲ್ಲಿ ಸುಧಾರಣೆ ಆಗುವುದು. ಮಂಕಾದ ತ್ವಚೆಯನ್ನು ಸುಧಾರಿಸಿ, ಹೊಳಪನ್ನು ನೀಡುವುದು. ಸೂರ್ಯನ ಕಿರಣಗಳಿಂದ ಸುಟ್ಟ ಕಲೆಗಳನ್ನು ಸುಲಭವಾಗಿ ನಿವಾರಿಸಲು ಸಹಾಯ ಮಾಡುವುದು.

ಹೃದಯಾಘಾತ ಹತ್ತಿರದಲ್ಲಿದೆ ಎಂದು ಸೂಚಿಸುವ ಲಕ್ಷಣಗಳಿವು

​ಮೊಡವೆಗಳ ನಿವಾರಣೆಗೆ ಸಹಾಯ ಮಾಡುವುದು

​ಮೊಡವೆಗಳ ನಿವಾರಣೆಗೆ ಸಹಾಯ ಮಾಡುವುದು

ಮುಖದ ಮೇಲೆ ಕಾಣಿಸಿಕೊಳ್ಳುವ ಮೊಡವೆಗಳ ನಿವಾರಣೆಗೆ ನುಗ್ಗೆ ಸೊಪ್ಪಿನ ಎಣ್ಣೆಯನ್ನು ಬಳಸಬಹುದು. ಮುಖಕ್ಕೆ ನುಗ್ಗೆ ಸೊಪ್ಪಿನ ಎಣ್ಣೆ ಅನ್ವಯಿಸಿದರೆ ಮೊಡವೆಗಳು ನಿವಾರಣೆಯಾಗುವುದು. ಜೊತೆಗೆ ಮೊಡವೆಯ ಕಾರಣದಿಂದ ಮುಖದ ಮೇಲೆ ಉಂಟಾಗುವ ನಿರ್ಜೀವ ಕೋಶಗಳು ಉದುರಿ ಹೊಸ ಜೀವ ಕೋಶಗಳಿಗೆ ಪ್ರಚೋದನೆ ನೀಡುವುದು. ಜೊತೆಗೆ ಮುಖದ ಮೇಲೆ ಮೊಡವೆಯಿಂದ ಉಂಟಾಗುವ ಕುರುಹು ಅಥವಾ ಕಲೆಗಳನ್ನು ಸಹ ಸುಲಭವಾಗಿ ನಿವಾರಿಸುವುದು.

​ಜೀವಾಣು ವಿಷಗಳನ್ನು ತೆಗೆದು ಹಾಕಲು ಸಹಾಯ ಮಾಡುವುದು

​ಜೀವಾಣು ವಿಷಗಳನ್ನು ತೆಗೆದು ಹಾಕಲು ಸಹಾಯ ಮಾಡುವುದು

ಮೊಡವೆಗಳ ಕಾರಣದಿಂದ ರಕ್ತದಲ್ಲಿ ಜೀವಾಣು ಸಂಗ್ರಹವಾಗುವ ಸಾಧ್ಯತೆಗಳಿರುತ್ತವೆ. ನುಗ್ಗೆ ಸೊಪ್ಪಿನ ಪುಡಿ ಅಥವಾ ನುಗ್ಗೆ ಬೀಜವನ್ನು ಸೇವಿಸುವುದರಿಂದ ಕರಕ್ತದಲ್ಲಿ ಇರುವ ವಿಷಕಾರಿ ಗುಣಗಳನ್ನು ನಿವಾರಿಸಬಹುದು. ರಕ್ತದ ಶುದ್ಧೀಕರಣವಾಗುವುದರೊಟ್ಟಿಗೆ ಚರ್ಮವನ್ನು ಆರೋಗ್ಯಕರವಾಗಿ ಇರಿಸುವುದು.

​ಚರ್ಮದ ಆರೋಗ್ಯ ಸುಧಾರಿಸುವುದು

​ಚರ್ಮದ ಆರೋಗ್ಯ ಸುಧಾರಿಸುವುದು

ಚರ್ಮದ ಮೇಲಿರುವ ಅನಗತ್ಯವಾದ ದೊಡ್ಡ ರಂಧ್ರಗಳನ್ನು ನುಗ್ಗೆ ಸೊಪ್ಪು ನಿವಾರಣೆ ಮಾಡುವುದು. ಚರ್ಮವನ್ನು ಬಿಗಿಗೊಳಿಸುವುದರ ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡುವುದು. ಇದು ಕಾಲಜನ್ ಪ್ರೋಟೀನ್ ಅನ್ನು ಚರ್ಮಕ್ಕೆ ನೀಡುವುದರಿಂದ ಚರ್ಮದಲ್ಲಿ ಇರುವ ದೊಡ್ಡ ರಂಧ್ರಗಳ ವಿಸ್ತಾರವನ್ನು ಕಡಿಮೆ ಗೊಳಿಸುವುದು. ಹಾಗಾಗಿ ಚರ್ಮದಲ್ಲಿ ಉಳಿದು ಕೊಳ್ಳುವ ಜಿಡ್ಡು ಹಾಗೂ ಕೊಳೆಯನ್ನು ಸುಲಭವಾಗಿ ನಿವಾರಿಸಬಹುದು. ಅಲ್ಲದೆ ಮೊಡವೆ, ಉರಿಯೂತ ಹಾಗೂ ಇನ್ನಿತರ ಚರ್ಮ ಸಂಬಂಧಿ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು.

ವಿಟಮಿನ್ ಡಿ ಅವಶ್ಯಕವೇನೋ ಹೌದು, ಆದರೆ ಅತಿಯಾದರೆ ಇದರ ಪರಿಣಾಮ ವಿಷಕಾರಕವಾಗಬಹುದು

​ನುಗ್ಗೆ ಸೊಪ್ಪಿನ ಫೇಸ್‌ ಮಾಸ್ಕ್

​ನುಗ್ಗೆ ಸೊಪ್ಪಿನ ಫೇಸ್‌ ಮಾಸ್ಕ್

- ನುಗ್ಗೆ ಸೊಪ್ಪಿನ ಎಲೆಗಳನ್ನು ಚೆನ್ನಾಗಿ ತೊಳೆದು, ಸೂರ್ಯನ ಕಿರಣದಲ್ಲಿ ಒಣಗಿಸಿಕೊಳ್ಳಿ.

- ಒಣಗಿದ ಎಲೆಗಳನ್ನು ನುಣುಪಾದ ಪುಡಿಯನ್ನಾಗಿ ಮಾಡಿಕೊಳ್ಳಬೇಕು.

- ನಂತರ ಗಾಜಿನ ಡಬ್ಬದಲ್ಲಿ ಅಥವಾ ಗಾಳಿ ಆಡದ ಡಬ್ಬದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು.

- ಅಗತ್ಯ ಇರುವಾಗ ಇಂದು ಬೌಲ್ ಅಲ್ಲಿ ಅರ್ದ ಟೇಬಲ್ ಚಮಚ ನುಗ್ಗೆ ಸೊಪ್ಪಿನ ಪುಡಿ, ಒಂದು ಟೇಬಲ್ ಚಮಚ ಜೇನುತುಪ್ಪ, ಸ್ವಲ್ಪ ಗುಲಾಬಿ ನೀರು ಮತ್ತು ಸ್ವಲ್ಪ ನಿಂಬೆ ರಸ ಸೇರಿಸಿ, ಬಳಿಕ ಸ್ವಲ್ಪ ನೀರನ್ನು ಬೆರೆಸಿ ಮೃದುವಾದ ಪೇಸ್ಟ್ ತಯಾರಿಸಿ.

- ಮುಂಜಾನೆ ಮುಖವನ್ನು ತೊಳೆದು ನಂತರ ಈ ಪೇಸ್ಟ್ ಅನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

- 10 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡ. ನಂತರ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ.

- ನಂತರ ಸ್ವಲ್ಪ ಮಾಯ್ಚುರೈಸರ್ ಕ್ರೀಮ್ ಅನ್ವಯಿಸಿ, ಚರ್ಮವನ್ನು ಮೃದುಗೊಳಿಸಿ.

- ಗಣನೀಯವಾಗಿ ಈ ಕ್ರಮವನ್ನು ಅನುಸರಿಸಿದರೆ ಸಮಸ್ಯೆಗಳಿಂದ ಮುಕ್ತವಾದ ಚರ್ಮವನ್ನು ಪಡೆಯಬಹುದು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ